ಗೌರವ ಪಡೆಯುತ್ತಿದ್ದ ಬ್ರಾಹ್ಮಣರು ಏಕೆ ಇಂದು ದೂಷಣೆಗೆ ಒಳಗಾಗಿದ್ದಾರೆ?

0
(0)

ಹಿಂದೆ ಬ್ರಾಹ್ಮಣರ ಶಿಸ್ತಿನ ಜೀವನ ಶೈಲಿಯನ್ನು ಇತರ ವರ್ಣದವರು ಗೌರವದಿಂದ ಕಾಣುತ್ತಿದ್ದರು. ಕ್ಷತ್ರಿಯರು ಅವರ ರಕ್ಷಣೆಯನ್ನೂ, ಪೋಷಣೆಯನ್ನೂ ಮಾಡುತ್ತಿದ್ದರು. ವೈಶ್ಯ-ಶೂದ್ರರು ಅವರ ಈ ಕೆಲಸಗಳಿಗೆ ಎಲ್ಲಾ ಸಹಕಾರವನ್ನೂ ನೀಡುತ್ತಿದ್ದರು. ವೇದಗಳನ್ನು ಕಂಠಸ್ಥ ಮಾಡುವ ಅವರ ಪರಿಶ್ರಮವನ್ನು ಮತ್ತು ಅವರ ಜೀವನ ಶೈಲಿಯನ್ನು ಗೌರವಾದರಗಳಿಂದ ನೋಡುತ್ತಿದ್ದರು. ಅವರ ನಿಯಮ-ಆಚಾರಗಳಿಗೆ ಸಹಕಾರಿಯಾಗುತ್ತಾ ಇರುತ್ತಿದ್ದರು. ಎಲ್ಲಾ ವರ್ಣ-ಜಾತಿಗಳ ಮಧ್ಯೆ ಸೌಹಾರ್ದತೆ – ಸಾಮರಸ್ಯ ಇತ್ತು ಎಂದು ಹೇಳಲಾಗುತ್ತದೆ.

ಆದರೆ ಇಂದು ಅದೇ ರೀತಿಯ ಜೀವನ ನಡೆಸುವ ಬ್ರಾಹ್ಮಣರನ್ನು ಅಸ್ಪೃಶ್ಯತೆಯ ಜನಕರೆಂದೂ, ಅದು ಮುಂದುವರೆಯುವುದಕ್ಕೆ ಜವಾಬ್ದಾರರೆಂದೂ ಹೇಳಲಾಗುತ್ತಿದೆ. ಬ್ರಾಹ್ಮಣರು ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸಿದರು ಎನ್ನಲಾಗುತ್ತಿದೆ. ವರ್ಣ ವ್ಯವಸ್ಥೆಯು ತಾರತಮ್ಯದ ವ್ಯವಸ್ಥೆಯೆಂದೂ, ಶೂದ್ರರನ್ನು ದಯನೀಯ ಸ್ಥಿತಿಯಲ್ಲಿ ಬ್ರಾಹ್ಮಣರು ಇರಿಸುತ್ತಾ ಎಲ್ಲಾ ಸುಖ-ಸಂಪತ್ತುಗಳನ್ನೂ, ಅನುಕೂಲತೆಯನ್ನೂ ಅನುಭವಿಸುತ್ತಿದ್ದರೆಂದೂ ಹೇಳಲಾಗುತ್ತಿದೆ.
ಶೂದ್ರರನ್ನು ಸೇವಕರಂತೆ, ಗುಲಾಮರಂತೆ ನಡೆಸಿಕೊಳ್ಳಲಾಗಿದೆಯೆಂದೂ ಹೇಳಲಾಗುತ್ತಿದೆ. ಇಂದು ವರ್ಣ-ಜಾತಿಗಳ ಮಧ್ಯೆ ಸೌಹಾರ್ದತೆ – ಸಾಮರಸ್ಯ ತುರ್ತಾಗಿ ಬೇಕಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಬ್ರಾಹ್ಮಣರ ಶಿಸ್ತಿನ ಜೀವನವನ್ನು ಅನುಸರಿಸದಿರುವ ಬ್ರಾಹ್ಮಣರನ್ನೂ ಕೂಡ ಅಪಹಾಸ್ಯ ಮಾಡಲಾಗುತ್ತಿದೆ. ಅವರೂ ಸಹ ಅರೋಪದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಅವರೂ ಕೂಡ ಬ್ರಾಹ್ಮಣರಿಗೆ ಸಿಗುವ ಎಲ್ಲಾ ಲಾಭಗಳನ್ನು ಇಂದಿಗೂ ಪಡೆಯುತ್ತಿದ್ದಾರೆ ಎನ್ನಲಾಗುತ್ತದೆ.

ಹಲವು ಶತಮಾನಗಳ ಅವಧಿಯಲ್ಲಿ ಈ ರೀತಿಯಲ್ಲಿ ಸಾರ್ವಜನಿಕ ದೃಷ್ಟಿಕೋನ ಬದಲಾಗಿದೆ. ಈ ರೀತಿಯ ಬದಲಾವಣೆಗೆ ಕಾರಣಗಳು ಏನು?

Average rating 0 / 5. Vote count: 0

No votes so far! Be the first to rate this post.

Please complete the required fields.


Leave a Reply

You do not need to fill in the Name field.