ವರ್ಣಾಶ್ರಮ ವ್ಯವಸ್ಥೆಯಲ್ಲಿ ಎಲ್ಲಾ ವರ್ಣಗಳಿಗೂ ಅವರದೇ ಆದ ನಿಯಮಗಳಿವೆ. ಮತ್ತು ಆ ನಿಯಮಗಳು ಬೇರೆಯವರ ಮೇಲೆ ಅವಲಂಬಿತವಾಗಿದೆ ಎಂದೇನಿಲ್ಲ. ವರ್ಣಗಳ ಒಳಗೇ ವಿವಾಹಗಳು ವ್ಯವಸ್ಥಿತವಾಗಿದ್ದರೂ, ಅಂತರ್ ವರ್ಣ ವಿವಾಹಗಳಿಗೆ ಸ್ಥಳವನ್ನೂ ನಿರ್ದೇಶಿಸಲಾಗಿದೆ. ಅದೇ ಕಾರಣದಿಂದ ಶೂದ್ರಾದಿ ಜಾತಿಗಳು ಸೃಷ್ಟಿಯಾಗಲು ಅವಕಾಶವಾಗಿದೆ. ಆದರೆ, ಪ್ರಸ್ತುತ, ವರ್ಣಾಶ್ರಮ-ಜಾತಿ ವ್ಯವಸ್ಥೆಯ ಮೇಲೆ ಹಲವಾರು ಆರೋಪಗಳನ್ನು ಮಾಡುತ್ತಾ, ಜಾತಿ ನಿರ್ಮೂಲನಾ ಉದ್ದೇಶವನ್ನು ಹಲವರು ಹೊಂದಿದ್ದಾರೆ.
ಅಂತರ್ಜಾತೀಯ ವಿವಾಹವನ್ನು ಈ ನೆಲೆಯಲ್ಲೇ ಪ್ರಶಂಸಿಲಾಗುತ್ತಿದೆ. ಜಾತಿಯನ್ನು ನಿರ್ಮೂಲನ ಮಾಡಬೇಕೆಂಬುದನ್ನು ನೇರವಾಗಿಯೇ ಹೇಳಲಾಗುತ್ತಿದೆ. ಈ ಅಭಿಪ್ರಾಯವನ್ನು ಕಾನೂನುಗಳ ಅರ್ಥೈಸುವಿಕೆಯಲ್ಲೂ, ಸಂವಿಧಾನವನ್ನು ಅನ್ವಯಮಾಡುವಾಗಲೂ ಮೂಡಿಸುವ ಪ್ರಕ್ರಿಯೆ ವ್ಯಾಪಕವಾಗಿದೆ. ಸಹಭೋಜನವನ್ನು, ಪ್ರೇಮವಿವಾಹವನ್ನು ಮತ್ತು ಅಂತಾರ್ಜಾತೀಯ ವಿವಾಹಗಳನ್ನು ಅನುಮೋದಿಸುವ, ಬೆಂಬಲಿಸುವ ಮತ್ತು ಪ್ರಚೋದಿಸುವ ಹಲವರು ಇವುಗಳನ್ನು ಸಮಾನತೆಗೆ ದಾರಿ ಅಥವಾ ಮಾನದಂಡ ಎಂದು ಪರಿಗಣಿಸುತ್ತಾರೆ. ವಿಧವಾ ವಿವಾಹ, ವಿಚ್ಚೇದನ ಮತ್ತು ಮರುವಿವಾಹಗಳ ಹೆಚ್ಚುವಿಕೆಯಲ್ಲಿ ಜಾತಿ ವಿನಾಶದ ಮೂಲಕ ಸಮಾನತೆ ಸಾಧಿಸುವ ಮಾರ್ಗ ಇದೆ.