ಬೆಳಗ್ಗೆ ಬೇಗ ಎದ್ದು ಮುಖ ತೊಳೆದು, ಕಸ ಗುಡಿಸಿ, ಸ್ನಾನ ಮಾಡಿ, ದೇವರಿಗೆ ನಮಸ್ಕರಿಸಿ, ಅಡುಗೆ ಮುಗಿಸಿ, ಎಲೆಗೆ ಸುತ್ತು ಕಟ್ಟಿ ಊಟ ಮಾಡಿ, ಗೋಮ ಹಚ್ಚಿ, ಬಟ್ಟೆಯಿಂದ ನೆಲ ಒರೆಸಿ, ಸ್ಕೂಲು, ಆಫೀಸು ಇತ್ಯಾದಿ ಜೀವನೋಪಾಯದ ಕಾರ್ಯಗಳನ್ನು ಮುಗಿಸಿಕೊಂಡು, ಪುನಃ ಸಂಜೆ ದೇವರಿಗೆ ದೀಪ ಹಚ್ಚಿ, ಸೂರ್ಯನಮಸ್ಕಾರ, ತುಳಸೀ ಪೂಜೆ, ದಿನಕ್ಕೆ ಎರಡೋ/ಮೂರೋ ಬಾರಿ ಸಂಧ್ಯಾವಂದನೆ ಮಾಡುತ್ತಾ, ಅಡುಗೆ ಮನೆ ಸ್ವಚ್ಚಗೊಳಿಸಿ ಮಲಗುವ ಬ್ರಾಹ್ಮಣರು, ಮುಸುರೆ, ಎಂಜಲು ಗಮನಿಸುತ್ತಾರೆ. ಅಮಾವಾಸ್ಯೆ/ಪೌರ್ಣಮಿಗಳಲ್ಲಿ ತರ್ಪಣ ಮಾಡುತ್ತಾರೆ. ತಿಂಗಳಿಗೊಮ್ಮೆ ರಾತ್ರಿ ವ್ರತ ಆಚರಿಸುತ್ತಾರೆ. ವೇದ ಕಲಿಯುತ್ತಾರೆ. ಸ್ತೋತ್ರ-ಪಾರಾಯಣ ಮಾಡುತ್ತಾರೆ. ಹಬ್ಬ-ವ್ರತಗಳನ್ನು ಆಚರಿಸುತ್ತಾರೆ. ಉಪಾಕರ್ಮ ಮಾಡುತ್ತಾರೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕರ್ಮಗಳನ್ನು ಆಚರಿಸುತ್ತಾರೆ. ಹುಟ್ಟು-ಮರಣ ಆದಾಗ ಮೈಲಿಗೆ ಆಚರಿಸುತ್ತಾರೆ. ಶ್ರಾದ್ಧ ಇತ್ಯಾದಿಗಳಲ್ಲಿ ಮಡಿ ಮಾಡುತ್ತಾರೆ.
ಈ ಜೀವನದಲ್ಲಿ ತಪ್ಪೆಲ್ಲಿದೆ? ಈ ರೀತಿ ಆಚರಣೆಯಲ್ಲಿ ಯಾರಿಗೆ ತೊಂದರೆ ಇದೆ?