ಇಂದು ಸಾರ್ವಜನಿಕವಾಗಿ, ಸಾಂಸ್ಥಿಕವಾಗಿ ವ್ಯವಹರಿಸುವ ಎಲ್ಲರೂ ಬ್ರಾಹ್ಮಣದೂಷಣೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾಡಲೇ ಬೇಕು ಎನ್ನುವಷ್ಟು ಸಹಜವಾಗಿದೆ. ಶಿಕ್ಷಣದ ಮೂಲಕವೂ ಸಹ ಈ ರೀತಿಯ ಅಭಿಪ್ರಾಯವನ್ನು ಮೂಡಿಸಲಾಗುತ್ತಿದೆ. ಅಪಪ್ರಚಾರ ಎಷ್ಟು ವ್ಯಾಪಕವಾಗಿದೆ ಎಂದರೆ, ಬಹಳಷ್ಟು ಬ್ರಾಹ್ಮಣರೇ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ತಮ್ಮ ತಾತ-ಮುತ್ತಾತಂದಿರು ಅಸಮಾನತೆ ಮಾಡಿಕೊಂಡು ಬಂದಿದ್ದಾರೆ ಎಂದು ನಂಬಿಕೊಂಡಿದ್ದಾರೆ. ತಮ್ಮ ಪೂರ್ವಜರು ಬೇರೆಯವರ ಭೂಮಿ ಕಬಳಿಸಿದ್ದಾರೆ ಎಂದೂ, ಇತರ ಜಾತಿಯವರ ಸ್ತ್ರೀಯರನ್ನು ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂಬ ಆರೋಪಗಳನ್ನೂ ಅಲ್ಲಗೆಳೆಯಲಾಗದ ಸಂಶಯದಲ್ಲಿದ್ದಾರೆ. ತಮ್ಮ ಪೂರ್ವಜರ ಆಚಾರಯುತ ಜೀವನವನ್ನು ಗೊಡ್ಡು, ಹಳತಾದ ಮತ್ತು ವ್ಯರ್ಥ ಜೀವನ ಪದ್ದತಿ ಎಂಬ ಅಭಿಪ್ರಾಯಗಳಿಗೆ ಹಲವರ ಸಹಮತವಿದೆ. ದ್ವಿಜ ಜಾತಿಯವರು ಹಿಂದೆ ಬೇರೆ ಜಾತಿಯವರ ವಿಚಾರದಲ್ಲಿ ಪಾಪ ಮಾಡಿದ್ದಾರೆ ಮತ್ತು ಇದಕ್ಕೆ ಅವರು ಬೆಲೆ ತೆರಬೇಕು ಎನ್ನುವ ಮಾತು ಸಾರ್ವಜನಿಕವಾಗಿ ಯಾವ ಸಂಕೋಚವೂ ಇಲ್ಲದೇ ವ್ಯಕ್ತವಾಗುತ್ತಿದೆ.
ಬ್ರಾಹ್ಮಣರ ಮೇಲೆ ನೂರಾರು ಮಿಥ್ಯಾರೋಪಗಳು
Leave a reply